ಉಡುಪಿ: ಯುವತಿ ನಾಪತ್ತೆ


ಉಡುಪಿ: ಉಡುಪಿ ತಾಲೂಕು ಹನುಮಂತನಗರ ನಿವಾಸಿ ಕಾಶಿಬಾಯಿ(20) ಎಂಬ ಯುವತಿಯು ಮಾರ್ಚ್ 3 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ.


122 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

ವ್ಯಕ್ತಿ ನಾಪತ್ತೆ


ಉಡುಪಿ : ಉಡುಪಿ ಜಿಲ್ಲೆಯ ನಿವಾಸಿ ಕೃಷ್ಣ ಪೂಜಾರಿ (57) ಎಂಬ ವ್ಯಕ್ತಿಯು ಮಾರ್ಚ್ 20 ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿರುತ್ತಾರೆ.


ಕಪ್ಪು ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಹಿಂದಿ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ ದೂ.ನಂ: 0820-2537999, ಮಲ್ಪೆ ಪಿ.ಎಸ್.ಐ ಮೊ.ನಂ:9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಲ್ಪೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ

Latest Indian news

Popular Stories