ಆತ್ಮಹತ್ಯೆಗೆ ಬಡತನ, ನಿರಾಸೆ, ಬದುಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ ಎಂಬುದು ಕಾರಣ : ನ್ಯಾಯಾಧೀಶೆ ದಿವ್ಯಶ್ರೀ ಅಭಿಮತ

ಕಾರವಾರ : ಆತ್ಮಹತ್ಯೆಗಳಿಗೆ ಬಡತನ, ನಿರಾಸೆ, ಬದುಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ ಎಂಬುದು ಕಾರಣಗಳಿರುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಕ್ರಿಮ್ಸ್ ವಿಜ್ಞಾನ ಸಂಸ್ಥೆಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾನವ ಜನ್ಮ ದೊಡ್ಡದು . ಅದನ್ನು ಹಾನಿ ಮಾಡಬೇಡಿ ಎಂದು ಪುರಂದರದಾಸರು ಹೇಳಿದ್ದು, ಭಗವಂತ ಯಾರನ್ನು ಸುಮ್ಮನೆ ಸೃಷ್ಠಿಸುವುದಿಲ್ಲ, ನಾವು ಭೂಮಿ ಮೇಲೆ ಜನಿಸಿದ್ದೇವೆ ಎಂದರೆ ಅದಕ್ಕೆ ಒಂದು ಧ್ಯೇಯ ಮತ್ತು ಕಾರಣವಿರುತ್ತದೆ. ಬೇರೆ ಯಾವುದೇ ಜೀವಿಗೆ ಸಿಗದಿರುವ ಸವಲತ್ತು ಮನುಷ್ಯನಿಗೆ ಸಿಕ್ಕಿದೆ . ಅದರ ಉದ್ದೇಶವನ್ನು ಅರಿಯದೆ ಆತ್ಮಹತ್ಯೆಯಂತಹ ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದರು.

ಮನುಷ್ಯನಿಗೆ ತನ್ನ ಜೀವದ ಮೇಲೆ ಆಸೆಯಿದ್ದರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಬದುಕಿನಲ್ಲಿ ನಿರೀಕ್ಷಿತ ಗುರಿ ಸಾಧಿಸಲಾಗಲಿಲ್ಲ ಎಂಬ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.

ಅತಿಯಾದ ನಿರೀಕ್ಷೆಯಿಂದ ಹೆಚ್ಚಾಗಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಪ್ರತಿಯೊಬ್ಬರು ತಮ್ಮ ಅಕ್ಕ ಪಕ್ಕದವರು ನಡವಳಿಕೆಯಲ್ಲಿ ಬದಲಾವಣೆ ಕಂಡು ಬಂದಾಗ, ಅವರ ನೋವನ್ನು ಅರಿತು , ಅವರನ್ನು ಕಾಳಜಿ ವಹಿಸಿ, ಮಾತನಾಡಿಸಿ, ಅವರ ಸಮಸ್ಯೆಗಳಿಗೆ ಸಾಂತ್ವನ ಹೇಳುವುದರ ಮೂಲಕ ಅವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟುಬಹುದು ಎಂದರು.

ಕ್ರಿಮ್ಸ್ನ ಮನೋವೈದ್ಯಕೀಯ ವಿಭಾಗದ ಪ್ರಾದ್ಯಾಪಕ ಹಾಗೂ ಮುಖ್ಯಸ್ಥ ಡಾ. ವಿಜಯರಾಜ್ ಆತ್ಮಹತ್ಯೆ ತಡೆಗಟುವ ಕುರಿತು ಮಾತನಾಡುತ್ತಾ , ಆತ್ಮಹತ್ಯೆ ನಿರೂಪಣೆಯನ್ನು ಬದಲಾಯಿಸುವುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಬಹುತೇಕ ಮಂದಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಎಲ್ಲ ಸಮಸ್ಯೆಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ.

ಆತ್ಮಹತ್ಯೆಗೆ ಪ್ರಯತ್ನಿಸಿಸುವವರು ಮತ್ತು ಆದರ ಬಗ್ಗೆ ಆಲೋಚಿಸುವವರನ್ನು ಗುರುತಿಸಿ ಅವರಿಗೆ ಜಾಗೃತಿ ಮೂಡಿಸಬೇಕು. ಜಗತ್ತಿನಲ್ಲಿ ಪ್ರತಿ 40 ಸೆಂಕಡ್‌ಗೆ ಒಬ್ಬರು ಆತ್ಮಹತ್ಯೆಯಿಂದ ಸಾವನಪ್ಪುತ್ತಿದ್ದಾರೆ. ಪ್ರತಿ ಮೂರು ಸೆಕೆಂಡ್‌ಗೆ 1 ಆತ್ಮಹತ್ಯೆ ಪ್ರಯತ್ನ ನಡೆಯುತ್ತಿದೆ ಪ್ರತೀ ನಿಮಿಷಕ್ಕೆ 10 ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತದೆ. ಭಾರತದಲ್ಲಿ ಶೇ.17 ರಷ್ಟು ಮಂದಿ ಆತ್ಮಹತ್ಯೆಯಿಂದ ಸಾವನಪ್ಪುತ್ತಿದ್ದಾರೆ. ಶೇ.12 ರಷ್ಟು ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ ಎಂದರು.

ಕೌಟುAಬಿಕ ಕಾರಣ, ಹಣದ ಸಮಸ್ಯೆ, ಮಾನಸಿಕ ಖಾಯಿಲೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಆತ್ಮಹತ್ಯೆ ಪ್ರಯತ್ನಿಸುವವರು ಹಾಗೂ ಅದರ ಬಗ್ಗೆ ಮಾತನಾಡುವುವರನ್ನು ಗುರುತಿಸಿ ಆಪ್ತ ಸಮಾಲೋಚನೆಗೆ ಒಳಪಡಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಕುರಿತ ಪೊಸ್ಟರ್ ಬಿಡುಗಡೆ ಮಾಡಲಾಯಿತು.
……..

Latest Indian news

Popular Stories