ಒಂದು ಕಾಲದ ದೇಶದ ಅತಿದೊಡ್ಡ ಸ್ಟಾರ್ಟಪ್ Byju’s ಮೌಲ್ಯ ಈಗ ‘ಶೂನ್ಯ’; ‘ಏನೇ ಬರಲಿ, ದಾರಿ ಹುಡುಕುತ್ತೇನೆ’ ಎಂದ ಮಾಲೀಕ!

ನವದೆಹಲಿ: ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಸ್ಟಾರ್ಟ್-ಅಪ್ ಆಗಿದ್ದ ಬೈಜುಸ್‌ ಸಂಸ್ಥೆಯ ಮೌಲ್ಯ ಈಗ ಶೂನ್ಯ ಎಂದು ಸ್ವತಃ ಸಂಸ್ಥೆಯ ಸಂಸ್ಥಾಪಕ ಬೈಜು ರವೀಂದ್ರನ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ತಮ್ಮ ಶಿಕ್ಷಣ-ತಂತ್ರಜ್ಞಾನ ಕಂಪನಿ ಬೈಜೂಸ್ ನ ಬೆಳವಣಿಗೆಯ ಸಾಮರ್ಥ್ಯವನ್ನು ನಾನು ಅತಿಯಾಗಿ ಅಂದಾಜು ಮಾಡಿದ್ದೆ. ಆದರೆ ಅದು ಈಗ “ಶೂನ್ಯ” ಮೌಲ್ಯದಲ್ಲಿದ್ದು ದಿವಾಳಿತನವನ್ನು ಎದುರಿಸುತ್ತಿದೆ. ಆದರೂ ಅದನ್ನು ಉಳಿಸುವ ಭರವಸೆಯನ್ನು ಹೊಂದಿದ್ದೇನೆ ಎಂದು ರವೀಂದ್ರನ್ ಹೇಳಿದ್ದಾರೆ.

ಗುರುವಾರ ತಡರಾತ್ರಿ ದುಬೈನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸುದ್ದಿಗಾರರೊಂದಿಗೆ ಸಂವಾದದಲ್ಲಿ ಮಾತನಾಡಿದ ರವೀಂದ್ರನ್, ‘ಕಂಪನಿಯ ಮೌಲ್ಯ ಶೂನ್ಯಕ್ಕೆ ಇಳಿದಿದೆ. ನೀವು ಯಾವ ಮೌಲ್ಯಮಾಪನದ ಬಗ್ಗೆ ಮಾತನಾಡುತ್ತಿದ್ದೀರೋ ನಮಗೆ ತಿಳಿದಿಲ್ಲ.

ಸಂಸ್ಥೆ ಈಗ ಶೂನ್ಯವಾಗಿದೆ. ನಾವು ಸಂಭಾವ್ಯ ಬೆಳವಣಿಗೆಯನ್ನು ಅತಿಯಾಗಿ ಅಂದಾಜು ಮಾಡಿದ್ದೆವು. ಏಕಕಾಲಕ್ಕೆ ಬಹಳಷ್ಟು ಮಾರುಕಟ್ಟೆಗಳನ್ನು ಪ್ರವೇಶಿಸುವ ನಿರ್ಧಾರ ಹಿನ್ನಡೆ ತಂದಿದೆ. ಇದು ಉತ್ತಮ ನಿರ್ಧಾರವೇ ಆದರೂ ಸ್ವಲ್ಪ ಹೆಚ್ಚು ಅಥವಾ ತುಂಬಾ ಬೇಗದ ಕ್ರಮ ಎಂದೆನಿಸುತ್ತಿದೆ ಎಂದು ಹೇಳಿದರು.

ಇದೇ ವೇಳೆ ತಮ್ಮ ಸಂಸ್ಥೆ ದಿವಾಳಿತನವನ್ನು ಎದುರಿಸುತ್ತಿದೆಯಾದರೂ ದಿವಾಳಿಯಾಗಿಲ್ಲ. ಸಂಸ್ಥೆಯ ಪುನ್ಃಶ್ಚೇತನಕ್ಕೆ ಎಲ್ಲ ರೀತಿಯ ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಏನೇ ಬರಲಿ, ದಾರಿ ಹುಡುಕುತ್ತೇನೆ ಎಂದು ರವೀಂದ್ರನ್ ಹೇಳಿದರು.

ಇನ್ನು 21 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೈಜುಸ್ ಸಂಸ್ಥೆ COVID-19 ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಶಿಕ್ಷಣ ಕೋರ್ಸ್‌ಗಳನ್ನು ನೀಡುವ ಮೂಲಕ ಜನಪ್ರಿಯವಾಯಿತು. ಇದರ ಮೌಲ್ಯಮಾಪನವು 2022 ರಲ್ಲಿ 22 ಶತಕೋಟಿ ಡಾಲರ್ ಗೆ ಏರಿತ್ತು.

ಆದರೆ ಆ ಬಳಿಕ ಕ್ರಮೇಣ ಸಂಸ್ಥೆ ಕುಸಿಯುತ್ತಾ ಸಾಗಿತು. ಒಂದು ಹಂತದಲ್ಲಿ ಬೈಜೂಸ್ ತನ್ನ ಸಿಬ್ಬಂದಿಗೇ ವೇತನ ನೀಡಲಾಗದ ಪರಿಸ್ಥಿತಿಗೆ ಕುಸಿದಿದ್ದು, ವೇತನ ನೀಡಲೂ ಕೂಡ ಸಾಲ ಮಾಡುವ ಪರಿಸ್ಥಿತಿಗೆ ಬಂದಿದೆ.

ಅಲ್ಲದೆ ಈ ರೀತಿ ಪಡೆದ ಸಾಲವನ್ನೂ ಕೂಡ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿಬಂದಿದ್ದು, ಸಂಸ್ಥೆಗೆ ಸಾಲ ನೀಡಿರುವ ಸಂಸ್ಥೆಗಳು ಬೈಜೂಸ್ ಸಂಸ್ಥೆ ಮತ್ತು ಅದರ ಮಾಲೀಕ ರವೀಂದ್ರನ್ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿವೆ.

Latest Indian news

Popular Stories