ಕೆಮ್ಮಣ್ಣು: ಅಕ್ರಮ ಮರಳು ಸಂಗ್ರಹ ಆರೋಪ : ಪ್ರಕರಣ ದಾಖಲು

ಕೆಮ್ಮಣ್ಣು: ಅಕ್ರಮ ಮರಳು ಸಂಗ್ರಹ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯ್‌ ಕೆ, ಸಹಾಯಕ ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್ ಠಾಣೆ ಇವರು ಅ. 17. ರಂದು ಸಂಜೆ 17:00 ಗಂಟೆ ಸಮಯಕ್ಕೆ ರೌಂಡ್ಸ್ ಕರ್ತವ್ಯದಲ್ಲಿ ಕೆಮ್ಮಣ್ಣು ಜಂಕ್ಷನ್ ಬಳಿ ಇರುವಾಗ ಪಡುತೋನ್ಸೆ ಗ್ರಾಮದ ತಿಮ್ಮಣ್ಣು ಕುದ್ರುವಿನ ಜಾಗವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳನ್ನು ನದಿಯಿಂದ ಕಳವು ಮಾಡಿ ತಂದು ರಾಶಿ ಹಾಕಿರುವ ಬಗ್ಗೆ ಮಾಹಿತಿ ಬಂದಿದೆ.

ಸ್ಥಳಕ್ಕೆ ಹೋದಾಗ ತಿಮ್ಮಣ್ಣಕುದ್ರು ಸುವರ್ಣ ನದಿ ತೀರದಲ್ಲಿ ಪಶ್ಚಿಮ ಬದಿಯಲ್ಲಿ ಇರುವ ಖಾಲಿ ಜಾಗದ ಬದಿಯಲ್ಲಿ ಮರಳನ್ನು ಶೇಖರಣೆ ಮಾಡಿರುವುದು ಕಂಡುಬಂದಿರುತ್ತದೆ. ಅದರಲ್ಲಿ ಸುಮಾರು 5 ಯುನಿಟ್ನಷ್ಟು ಮರಳು ಇರುತ್ತದೆ. ಮರಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುವ ಉದ್ದೇಶದಿಂದ ಮರಳನ್ನು ಖಾಸಗಿ ಜಾಗದಲ್ಲಿ ರಾಶಿ ಹಾಕಿರುವುದಾಗಿ ದೂರು ದಾಖಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2024 ಕಲಂ: 303(2) BNS AND 4,4a,21 MMRD ACT ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories