ದಕ್ಷಿಣ ಕನ್ನಡ, ಉಡುಪಿ ಗಡಿಯಲ್ಲಿ ಬಿಗಿ ತಪಾಸಣೆ!

ಮಂಗಳೂರು: ದ.ಕ ಮತ್ತು ಉಡುಪಿ ಗಡಿ ಪ್ರದೇಶದಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರ ದಿಂದ ಬರುವ ಜನರಿಗೆ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ ಆ ಕಾರಣಕ್ಕಾಗಿ ಅಲ್ಲಿಂದ ಪ್ರವೇಶಿಸುವ ನಾಗರಿಕರ ತಪಾಸಣೆ ನಡೆಸಲಾಗುತ್ತಿದೆ.

ನೆಗೆಟಿವ್ ಸರ್ಟಿಫಿಕೇಟ್ ಹೊಂದಿರದವರನ್ನು ಗಡಿಯಲ್ಲೇ ತಡೆಯಲಾಗುತ್ತಿದ್ದು ಇದು ಪೊಲೀಸರ ಮತ್ತು ನಾಗರಿಕರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ.
ತಲಪಾಡಿಯಲ್ಲಿ ಸೋಮವಾರ ಕೇರಳದಿಂದ ಪ್ರವೇಶಿಸುವವರಿಗೆ ಆರ್‌ಟಿ- ಪಿಸಿಆರ್‌ ಟೆಸ್ಟ್‌ ಕಡ್ಡಾಯ ಗೊಳಿಸಿರುವುದನ್ನು ಆಕ್ಷೇಪಿಸಿ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಪ್ರಸಂಗವೂ ನಡೆದಿದೆ.

ಪುತ್ತೂರಿನಲ್ಲಿ ಶಾಸಕ ಎ. ಸಂಜೀವ ಮಠಂದೂರು ಅವರು ಎಲ್ಲ ಕರ್ನಾಟಕ-ಕೇರಳ ಸಂಪರ್ಕ ರಸ್ತೆಗಳನ್ನು ಮುಚ್ಚಲು ಸೂಚಿಸಿದ್ದಾರೆ. ಇದರೊಂದಿಗೆ ಪುತ್ತೂರು-ಸುಳ್ಯದ ಗಡಿ ಭಾಗಗಳಲ್ಲೂ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ.

Latest Indian news

Popular Stories