ಕೋಲಾರ : ಘಟನೆಗೆ ಸಂಬಂಧಿಸಿದಂತೆ ಎಲ್ಲರನ್ನು ಅಮಾನತುಗೊಳಿಸಿ,HC ಮಹದೇವಪ್ಪ ಆದೇಶ

ಕೋಲಾರ: ಕೋಲಾರದಲ್ಲಿ ಮಕ್ಕಳಿಂದ ಶೌಚಗುಂಡಿ ಕ್ಲೀನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರು ವಾರ್ಡನ್, ಸೇರಿದಂತೆ ಎಲ್ಲರನ್ನು ಮಾಡಿ ಎಲ್ಲರನ್ನೂ ಅಮಾನತು ಮಾಡಿ ತನಿಖೆ ನಡೆಸಿ ಎಂದು ಹೇಳಿದ್ದೇನೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ HC ಮಹಾದೇವಪ್ಪ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳಿಂದ ಗುಂಡಿ ಕ್ಲೀನ್ ಮಾಡಿಸಿದ ಪ್ರಕರಣದ ಕುರಿತು ಬಂದಿದೆ.ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಎಲ್ಲರನ್ನೂ ಸಸ್ಪೆಂಡ್ ಮಾಡಿ ವರದಿ ಕೊಡುವಂತೆ ಹೇಳಿದ್ದೇನೆ ಎಂದರು.

ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯದಂತೆ ಸುತ್ತೋಲೆ ಹೊರಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.ಕೋಲಾರ ಪ್ರಕರಣವನ್ನು ಸಚಿವ HC ಮಾದೇವಪ್ಪಾ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜ್ಯಾದ್ಯಂತ ಸುತ್ತೋಲೆ ಹೊರಡಿಸುವಂತೆ ತಿಳಿಸಿದ್ದಾರೆ.ಮಾಲೂರು ತಾಲೂಕಿನ ಎಳವಳ್ಳಿ ಬಳಿಯ ಶಾಲೆ ಶೌಚಾಲಯ ಕ್ಲೀನ್ ಮಾಡಿಸಿದವರನ್ನು ಅಮಾನತು ಮಾಡುತ್ತೇವೆ ಶಿಕ್ಷಕ ಅಭಿಷೇಕ್ನನ್ನು ಕೆಲಸದಿಂದ ತೆಗೆದುಹಾಕುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

Latest Indian news

Popular Stories