ಹಳ್ಳಿ ಹಳ್ಳಿಗಳಲ್ಲೂ ಬಿಸಿನೆಸ್ ಆರಂಭಿಸಲು ಅಂಬಾನಿ ಪ್ಲಾನ್‌, ಬರೋಬ್ಬರಿ 500 ಕೋಟಿ ರೂ. ಹೂಡಿಕೆ

ಮಹಾರಾಷ್ಟ್ರ :ಮುಕೇಶ್ ಅಂಬಾನಿ, ಗ್ರಾಮೀಣ ಪ್ರದೇಶಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಅದಕ್ಕಾಗಿ ಅವರು ಬರೋಬ್ಬರಿ 500 ಕೋಟಿ ರೂ.ಫ್ಯಾಷನ್‌, ಗ್ರೋಸರಿ, ಇಂಧನ, ಶಿಕ್ಷಣ ಹೀಗೆ ಹಲವು ಕ್ಷೇತ್ರಗಳಲ್ಲಿ ಅಂಬಾನಿ ಗ್ರೂಪ್‌ ವ್ಯವಹಾರ ನಡೆಸುತ್ತಿದೆ. ಸದ್ಯ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, ಗ್ರಾಮೀಣ ಪ್ರದೇಶಗಳಿಗೆ ತಮ್ಮ ಉದ್ಯಮವನ್ನು ವಿಸ್ತರಿಸಲು ಮುಂದಾಗಿದ್ದಾರೆ.

ಮುಕೇಶ್‌ ಅಂಬಾನಿಯವರ ರಿಲಯನ್ಸ್ ರಿಟೇಲ್ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಬ್ಯಾನರ್ ಅಡಿಯಲ್ಲಿ 500 ಕೋಟಿ ಮೌಲ್ಯದ ಉಡುಪುಗಳ ಸಣ್ಣ ಅಂಗಡಿಗಳನ್ನು ತೆರೆಯಲು ಸಿದ್ಧವಾಗಿದೆ.

ಇದರಲ್ಲಿ ವಿ-ಮಾರ್ಟ್ ರಿಟೇಲ್‌ನಂತಹ ಕಂಪನಿಗಳೊಂದಿಗೆ ನೇರ ಸ್ಪರ್ಧೆಯನ್ನು ಹೊಂದಲಿದೆ. ಪ್ರಸ್ತುತ, ರಿಲಯನ್ಸ್ ಸಿಲಿಗುರಿ, ಧುಲೆ ಮತ್ತು ಔರಂಗಾಬಾದ್‌ನಂತಹ ನಗರಗಳಲ್ಲಿ ಐದು ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಮಳಿಗೆಗಳನ್ನು ತೆರೆದಿದೆ.

ರಿಲಯನ್ಸ್ ಸಣ್ಣ ಪಟ್ಟಣಗಳಲ್ಲಿ ಸುಮಾರು 2,600 ಟ್ರೆಂಡ್ಸ್ ಸ್ಟೋರ್‌ಗಳನ್ನು ತೆರೆದಿದೆ ಆದರೆ ಫ್ಯಾಶನ್ ವರ್ಲ್ಡ್ ಬೈ ಟ್ರೆಂಡ್ಸ್ ಸ್ಟೋರ್‌ಗಳು ಅವುಗಳಿಂದ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.
ಟ್ರೆಂಡ್ಸ್‌ ಅಂಗಡಿಗಳನ್ನು ಹೊಂದಿರದ ನಗರಗಳಲ್ಲಿ ಈ ಸಣ್ಣ ಮಳಿಗೆಗಳನ್ನು ಸಾಮಾನ್ಯವಾಗಿ ತೆರೆಯಲಾಗುತ್ತದೆ. ಕೆಲವು ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಅಂಗಡಿಗಳನ್ನು ತೆರೆಯಬಹುದು.

ಇದು ಬ್ರ್ಯಾಂಡ್ ಉಡುಪುಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಲು ರಿಲಯನ್ಸ್‌ಗೆ ಸಹಾಯ ಮಾಡುತ್ತದೆ. ರಿಲಯನ್ಸ್ ರಿಟೇಲ್ ಇತ್ತೀಚೆಗೆ 50ಕ್ಕೂ ಹೆಚ್ಚು ವಿಶೇಷವಾದ ಉಡುಪು ಬ್ರಾಂಡ್‌ಗಳನ್ನು ಬಿಡುಗಡೆ ಮಾಡಿದೆ. ಒಟ್ನಲ್ಲಿ ರಿಲಯನ್ಸ್‌ ಉದ್ಯಮ ಇನ್ಮುಂದೆ ಹಳ್ಳಿ ಹಳ್ಳಿಗೂ ಕಾಲಿಡಲಿದ್ದು, ಅಂಬಾನಿ ಕೈಗೆಟುಕುವ ಬೆಲೆಯಲ್ಲಿ ಜನರಿಗೆ ಫ್ಯಾಷನ್ ಬ್ರ್ಯಾಂಡ್‌ ಒದಗಿಸುತ್ತಿದ್ದಾರೆ.

Latest Indian news

Popular Stories