ಫೇಕ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ 3 ಕೋಟಿ ರೂ. ಕಳೆದುಕೊಂಡ ಯುವಕ

ಮೈಸೂರು: ನಕಲಿ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿ ಮೈಸೂರಿನ ಯುವಕನ್ನೊಬ್ಬ 2.96 ಕೋಟಿ ರೂ. ಕಳೆದುಕೊಂಡಿದ್ದು, ನಗರದಲ್ಲಿ ಇಷ್ಟು ದೊಡ್ಡ ಮೊತ್ತದ ಆನ್‌ಲೈನ್‌ ವಂಚನೆ ನಡೆದಿರುವುದು ಇದೇ ಮೊದಲು.

ಸರಸ್ವತಿಪುರಂ ನಿವಾಸಿ 30 ವರ್ಷದ ಯುವಕ ವಂಚನೆಗೆ ಒಳಗಾಗಿದ್ದಾನೆ.
ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿದ್ದ ಯುವಕ, ಸಾಮಾಜಿಕ ಜಾಲತಾಣದಲ್ಲಿ ಆಯಪ್‌ ಒಂದನ್ನು ಡೌನ್‌ ಲೋಡ್‌ ಮಾಡಿಕೊಂಡಿದ್ದಾನೆ.

ಕಳೆದ ಎಪ್ರಿಲ್‌ನಿಂದ ಹಂತ ಹಂತವಾಗಿ 2.96 ಕೋಟಿ ರೂ. ಹೂಡಿಕೆ ಮಾಡಿ, ಬಳಿಕ ಲಾಭ ಬರುವ ನಿರೀಕ್ಷೆಯಲ್ಲಿದ್ದ. ಆದರೆ ಸಾಕಷ್ಟು ದಿನಗಳು ಕಳೆದರೂ ಹಣ ಬಾರದೇ ಇದ್ದ ಮೇಲೆ ವಂಚನೆಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದೇ ರೀತಿ ಐದು ಮಂದಿ ನಕಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 20 ಲಕ್ಷ ರೂ. ಕಳೆದುಕೊಂಡಿರುವುದು ಬೆಳಕಿಗೆ ಬಂ ದಿದೆ.

Latest Indian news

Popular Stories