ನಾಗ್ಪುರ : ಮದುವೆ ಸಮಾರಂಭದಿಂದ ವಾಪಾಸ್ ಆಗುತ್ತಿದ್ದಾಗ ಭೀಕರ ಅಪಘಾತ; ಸ್ಥಳದಲ್ಲೇ 6 ಮಂದಿ ದುರ್ಮರಣ

ನಾಗ್ಪುರ: ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದ ಹೊರವಲಯದಲ್ಲಿ ನಡೆದಿದೆ.

ನಾಗ್ಪುರದ ಸೋನಖಾಂಬ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಟ್ರಕ್ ಗೆ ಕಾರು ಡಿಕ್ಕಿ ಹೊಡೆದಿದೆ.ಅಜಯ್ ದಶರತ್ (45), ವಿಠಲ್ ದಿಂಗಂಬರ್ ತೋಟೆ (45), ಸುಧಾಕರ್ ರಾಮಚಂದ್ರ ಮಾನಕರ್(42), ರಮೇಶ್ ಓಂಕಾರ್(48), ಮಯೂರ್ ಮೂರೇಶ್ವರ್ ಇಂಗ್ಲೆ (26), ವೈಭವ್ (32) ಮೃತರು.

ಮದುವೆ ಸಮಾರಂಭ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ನಾಗ್ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Latest Indian news

Popular Stories