ಕಾಪು: ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮಹಿಳೆ ಮೃತ್ಯು

ರಾಷ್ಟ್ರೀಯ ಹೆದ್ದಾರಿ 66ರ ಮೂಳೂರು ಎಂಬಲ್ಲಿ ಬುಧವಾರ ಮಧ್ಯಾಹ್ನ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮೂಳೂರು ಮಹಾಲಕ್ಷ್ಮಿ ನಗರದ ನಿವಾಸಿ ಲೀಲಾವತಿ ಸಾಲಿಯಾನ್ (65) ಮೃತ ದುರ್ದೈವಿ. ಮೂಳೂರಿನ ಅಂಚೆ ಕಚೇರಿಯಿಂದ ಹಣ ಪಡೆದು ಮನೆಗೆ ಮರಳುತ್ತಿದ್ದರು. ಕಾರು ಉಡುಪಿ ಕಡೆಗೆ ಅತೀ ವೇಗದಲ್ಲಿ ಚಲಿಸುತ್ತಿತ್ತು.ಡಿಕ್ಕಿಯ ರಭಸಕ್ಕೆ ಲೀಲಾವತಿ ಗಾಳಿಗೆ ಹಾರಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಸಾವನ್ನಪ್ಪಿದ್ದಾಳೆ.

ಕಾರು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾಪು ಸಿಐ ಜಯಶ್ರೀ ಎಂ ಮಾನೆ, ಎಸ್‌ಐ ಅಬ್ದುಲ್ ಖಾದರ್ ಸ್ಥಳಕ್ಕೆ ಭೇಟಿ ನೀಡಿ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಲೀಲಾವತಿ ಅವರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Latest Indian news

Popular Stories