ಸುರತ್ಕಲ್ ಹಳೆಯ ಟೋಲ್ ಬೂತ್‌ಗೆ ಲಾರಿ ಢಿಕ್ಕಿ

ಮಂಗಳೂರು: ಬೆಂಗಳೂರಿನಿಂದ ಉಡುಪಿಗೆ ತರಕಾರಿ ಸಾಗಿಸುತ್ತಿದ್ದ ಈಚರ್ ಲಾರಿಯೊಂದು ಸುರತ್ಕಲ್‌ನ ಹಳೆಯ ಟೋಲ್ ಸಂಗ್ರಹ ಬೂತ್‌ಗೆ ಢಿಕ್ಕಿ ಹೊಡೆದ ಘಟನೆ ಆದಿತ್ಯವಾರ ಬೆಳಗ್ಗಿನ ಜಾವ ನಡೆದಿದೆ.

ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸುರತ್ಕಲ್ ಎನ್.ಐ.ಟಿ.ಕೆ ಸಮೀಪದಲ್ಲಿರುವ ಹಳೆಯ ಟೋಲ್ ಗೇಟ್ ನ ವಿಭಜಕದ ಮೇಲೇರಿದ ಲಾರಿಯು ಟೋಲ್ ಬೂತ್ ಗೆ ಡಿಕ್ಕಿಯಾಗಿದ್ದು, ಲಾರಿ ಪಲ್ಟಿಯಾಗಿ ಬಿದ್ದಿದೆ. ಈ ಘಟನೆಯಿಂದ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಟೋಲ್ ಗೇಟ್ ನ ಒಂದು ಟೋಲ್ ಬೂತ್ ಹಾಗೂ ಕಬ್ಬಿಣದ ಪಿಲ್ಲರ್ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories