ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯ ಪೊಲೀಸರು ಬಿಜೆಪಿ ಶಾಸಕ ಮುರತ್ನ ಅವರನ್ನು ಬಂಧಿಸಿದ್ದಾರೆ. ಮುನಿರತ್ನ ವಿರುದ್ಧ ದೂರು ಸಲ್ಲಿಸಿದ್ದ ಸಂತ್ರಸ್ತೆ ಮಹಿಳೆ ಕೆಲವು ಸ್ಫೋಟಕ ಆರೋಪ ಮಾಡಿದ್ದು, ಎಚ್ ಐ ವಿ ಸೋಂಕಿತರನ್ನು ಬಳಸಿಕೊಂಡು ಮುನಿರತ್ನ ಹನಿ ಟ್ರಾಪ್ ಮಾಡುತ್ತಿದ್ದರು ಎಂಬ ಸ್ಪೋಟಕವಾದಂತಹ ಆರೋಪ ಮಾಡಿದ್ದಾರೆ.
ಹೌದು ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ಮುನಿರತ್ನ ಅವರು ಹನಿಟ್ರ್ಯಾಪ್ ಗೆ ಎಚ್ ಐ ವಿ ಸೋಂಕಿತರನ್ನು ಬಳಸಿಕೊಂಡಿದ್ದಲ್ಲದೆ, ಅನೇಕರ ಖಾಸಗಿ ವಿಡಿಯೋಗಳು ಮುನಿರತ್ನ ಅವರ ಬಳಿ ಇವೆ ವಿಡಿಯೋ ಕುರಿತು ದೂರಿನಲ್ಲಿ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಇದೀಗ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಮುನಿರತ್ನ ವಿರುದ್ಧ ಅತ್ಯಾಚಾರ ಸಂತ್ರಸ್ತೆ ಉಲ್ಲೇಖ ಮಾಡಿದ್ದು, ರಾಜಕೀಯ ಎದುರಾಳಿಗಳನ್ನು ಹಣಿಯಲು ಹನಿ ಟ್ರ್ಯಾಪ್ ತಂತ್ರ ಕೂಡ ಮುನಿರತ್ನ ಪ್ರಯೋಗ ಮಾಡುತ್ತಾ ಇದ್ದರು. ಹಾಗಾಗಿ ಅನೇಕರ ಖಾಸಗಿ ವಿಡಿಯೋ ಕೂಡ ಇದೆ ಎಂದು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೆಚ್ಚಾಗಿ HIV ಸೋಂಕಿತರನ್ನು ಮುನಿರತ್ನ ಬಳಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.