ಸುರತ್ಕಲ್ ಬೀಚ್​ನಲ್ಲಿ ಅಪರೂಪದ ಮೀನು ಪತ್ತೆ

ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್​ನಲ್ಲಿ ಅಪರೂಪದ ಮೀನು ಪತ್ತೆಯಾಗಿದೆ. ಸ್ಪಾಟೆಡ್ ಮೊರೈ ಈಲ್ಸ್ ಹೆಸರಿನ ಅಪರೂಪದ ಮೀನು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿ ಕಾಣುವ ಈ ಮೀನು, ದ್ವೀಪದ ಬಳಿಯ ಹವಳ ದಿಬ್ಬದಂತಹ ಸ್ಥಳಗಳಲ್ಲಿ ವಾಸ ಮಾಡುತ್ತದೆ. ಪ್ರಕ್ಷುಬ್ಧವಾದ ಕಡಲಿನ ಅಬ್ಬರದಿಂದ ತೀರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಆರೋಳಿ ಎಂದು ಕರೆಯಲ್ಪಡುವ ಈ ಮೀನನ್ನು ಸ್ಥಳೀಯರು ತಿನ್ನಲ್ಲ ಎಂದು ಮೀನುಗಾರರು ಮಾಹಿತಿ ನೀಡಿದರು.

Latest Indian news

Popular Stories