ಪುತ್ತೂರು: ಕಾರು ಡಿಕ್ಕಿ – ಐದು ವರ್ಷದ ಬಾಲಕ ಮೃತ್ಯು
ಪುತ್ತೂರು, ಸೆ.24: ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಯುಕೆಜಿ ವಿದ್ಯಾರ್ಥಿಯು ಕಾರು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಕೆಯ್ಯೂರಿನಲ್ಲಿ ಶನಿವಾರ ನಡೆದಿದೆ.
ಕೆಯ್ಯೂರಿನ ನಿವಾಸಿ ಹ್ಯಾರಿಸ್ ದಾರಿಮಿ ಎಂಬವರ ಪುತ್ರ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಯುಕೆಜಿ ವಿದ್ಯಾರ್ಥಿ ಮೊಹಮ್ಮದ್ ಆದಿಲ್ (5) ಮೃತ ಬಾಲಕ
ಆದಿಲ್ ತನ್ನ ಶಾಲೆಯ ಬಳಿ ಸಂಜೆ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡ ಆದಿಲ್‌ನನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಆದರೆ ಸ್ವಲ್ಪ ಸಮಯದ ನಂತರ ಅವರು ಗಾಯ ಮೃತಪಟ್ಟಿದ್ದಾರೆ.