ಕುಶಾಲನಗರ ಸಮೀಪದ ಗುಡ್ಡೆಹೊಸೂರು ಬಸವನ ಹಳ್ಳಿ ನಿವಾಸಿ ಸುನಿಲ್ ಕುಮಾರ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ
ನಾಪೋಕ್ಲು ವಿನಲ್ಲಿ ಹೋಬಳಿ ಉಪತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನಿಲ್ ಕುಮಾರ್ ಅವರು ನೆನ್ನೆ ಶನಿವಾರ ಕೂಡ ನಾಪೋಕ್ಲುವಿನಲ್ಲಿ ಸುನಿಲ್ ಕುಮಾರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯ ಮುಗಿಸಿ ನೆನ್ನೆ ಸಂಜೆ ಮನೆಗೆ ತೆರಳಿದ್ದ ಸುನಿಲ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಕುಮಾರ್ ಇಂದು ನಿಧನ ಹೊಂದಿದ್ದಾರೆ.