Breaking News: ಉಪ ಚುನಾವಣೆ: ಪ್ರಿಯಾಂಕಾ ಗಾಂಧಿ ವಯನಾಡಿನಿಂದ ಸ್ಪರ್ಧೆ ಖಚಿತ: AICC

ನವದೆಹಲಿ, ಅಕ್ಟೋಬರ್ 15: ಕೇರಳದಲ್ಲಿ ಒಂದು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸುವುದನ್ನು ಎಐಸಿಸಿ ಮಂಗಳವಾರ ಖಚಿತಪಡಿಸಿದೆ.

ಪ್ರಿಯಾಂಕಾ ಗಾಂಧಿ ಹೆಸರು ಸೇರಿದಂತೆ ಮೂರು ಅಭ್ಯರ್ಥಿಗಳನ್ನು ಘೋಷಿಸಿ ಕಾಂಗ್ರೆಸ್ ಪಟ್ಟಿ ಹೊರಡಿಸಿದೆ.

ಕುತೂಹಲ ಕೆರಳಿಸಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಿದೆ. ಇನ್ನು ಕೇರಳದ ಪಲಕ್ಕಾದ ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್ ಮಮ್ಕೋತಾಥಿಲ್ ಹಾಗೂ ಛೆಲಕ್ಕಾರ (ಎಸ್‌ಸಿ) ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಹರಿದಾಸ್ ಅವರನ್ನು ಎಐಸಿಸಿ ಕಣಕ್ಕಿಳಿಸುತ್ತಿದೆ.

ವಾಯನಾಡು ಕ್ಷೇತ್ರದಿಂದ ಆಯ್ಕೆ ಆಗಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಆ ಸ್ಥಾನಕ್ಕೆ ಉಪಚುನಾವಣೆ ನಡೆಸುವ ಅನಿವಾರ್ಯವಾಗಿತ್ತು. ಸದ್ಯ ಅವರ ನಂತರ ಯಾರು ಆ ಸ್ಥಾನದಿಂದ ಸ್ಪರ್ಧಿಸಬಹುದಾದ ಪ್ರಬಲರು ಎಂಬ ಕುತೂಹಲ ಹೆಚ್ಚಾಗಿತ್ತು. ರಾಹುಲ್ ರಾಜೀನಾಮೆ ಬೆನ್ನಲ್ಲೆ ಪ್ರಿಯಾಂಕಾ ಗಾಂಧಿ ಹೆಸರು ಕೇಳಿ ಬಂದಿತ್ತು. ಅದರಂತೆ ಎಐಸಿಸಿ ಅವರನ್ನೇ ಕಣಕ್ಕಿಳಿಸಿ ಪಟ್ಟಿ ಬಿಡುಗಡೆ ಮಾಡಿದೆ.

Latest Indian news

Popular Stories