ಬೀಡಿ ಕಾರ್ಮಿಕರ ಹೋರಾಟ ತೀವ್ರಗೊಳಿಸಲು ಸಿ.ಪಿ.ಐ.ಎಂ ಪಕ್ಷದ ಶಾಖಾ ಸಮ್ಮೇಳನ ಕರೆ—ಕವಿರಾಜ್.ಎಸ್.ಕಾಂಚನ್

ಬೀಡಿ ಕಾರ್ಮಿಕರ ಕನಿಷ್ಟ ಕೂಲಿ,ಬಾಕಿ ಇರುವ ತುಟ್ಟಿಭತ್ಯೆ,ಇ.ಎಸ್.ಐ.ಆಸ್ಪತ್ರೆ,ಪಿಂಚಣಿ, ಪಿ.ಎಫ್ ಸಮಸ್ಯೆಗಳ ಬಗ್ಗೆ ಹೋರಾಟ ನಡೆದಿದ್ದು ಮುಂದೆ ಮತಷ್ಟು ತೀವ್ರ ಗೋಳಿಸಬೇಕಾಗಿದೆ.

ಅವಿಭಜಿತ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ಲಕ್ಷಾಂತರ ಬೀಡಿ ಕಾರ್ಮಿಕರು ಕೆಲಸ ಮಾಡಿ ತಮ್ಮ ಜೀವನ ಹಾಗೂ ಕುಟುಂಬ ನಿರ್ವಹಣೆಯನ್ನು ನಡೆಸುತ್ತಿದ್ದಾರೆ.ಬೀಡಿ ಕಂಪನಿಗಳಲ್ಲಿ ಬೇರೆ ಬೇರೆ ವಿಭಾಗದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

ಅದರೆ ಸರಕಾರ ಇವತ್ತು ಬೀಡಿ ಕಾರ್ಮಿಕರ ಬಗ್ಗೆ ಚಕಾರವೆತ್ತುತ್ತಿಲ್ಲ.ಸರ್ಕಾರ ನಿಗದಿ ಮಾಡಿದ ತುಟ್ಟಿಭತ್ಯೆಯನ್ನು ಮಾಲಕರು ನಿಡುತ್ತಿಲ್ಲ.ಅದ್ದರಿಂದ ಎರಡು ಜಿಲ್ಲೆಯ ಬೀಡಿ ಕಾರ್ಮಿಕರು ಒಗ್ಗೂಡಿ ಎಲ್ಲಾ ಶಾಸಕರ ಮತ್ತು ಸಂಸದರ ಕಛೇರಿ ಮನೆ ಮುಂದೆ ಅನಿರ್ದಿಷ್ಟ ಹೋರಾಟ ಕೈಗೊಳ್ಳ ಬೇಕೆಂದು ಸಿ.ಪಿ.ಐ.ಎಮ್.ಪಕ್ಷದ ಕೇಳಾರ್ಕಳಬೆಟ್ಟು ಶಾಖಾ ಸಮ್ಮೇಳನದಲ್ಲಿ ಸಿ.ಪಿ.ಐ.ಎಮ್.ಪಕ್ಷದ ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್.ಸಮ್ಮೇಳನ ಉಧ್ಘಾಟಿಸಿ ಕರೆ ನೀಡಿದರು.ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಉಮೇಶ್ ಕುಂದರ್,ಉಡುಪಿ ವಲಯ ಸಮಿತಿ ಸದಸ್ಯರಾದ ನಳಿನಿ.ಎಸ್ ಹಾಗೂ ಶಾಖಾ ಸದಸ್ಯರು ಉಪಸ್ಥಿತರಿದ್ದರು.

ಶಾಖಾ ಕಾರ್ಯದರ್ಶಿ ವರದಿ ನೀಡಿ ಅದರ ಮೇಲೆ ಚರ್ಚೆ ನಡೆಸಿದರು.ಧ್ವಜಾರೋಹಣವನ್ನು ಹಿರಿಯ ಪಕ್ಷದ ಸದಸ್ಯರಾದ ರಾಧ ರವರು ನೇರವೆರಿಸಿದರು
ಕೇಳಾರ್ಕಳಬೆಟ್ಟು ಶಾಖೆಯ ನೂತನ ಕಾರ್ಯದರ್ಶಿ ಯಾಗಿ ಕಮಲ ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Latest Indian news

Popular Stories