ಗುಲಾಬಿ’ಹೂವಿಗೆ ಬಂಪರ್ ಬೆಲೆ : ಮೊದಲ ಬಾರಿಗೆ ಕೆಜಿಗೆ 400 ರ ಗಡಿ ದಾಟಿದ ರೋಸ್.!

ಗುಲಾಬಿ ಹೂಗೆ ಚಿನ್ನದ ಬೆಲೆ ಬಂದಿದ್ದು, ಮೊದಲ ಬಾರಿಗೆ 400 ರ ಗಡಿ ದಾಟಿದೆ. ಹೌದು, ದಸರಾ ಹಬ್ಬದ ಹೊತ್ತಲ್ಲೇ ಗುಲಾಬಿಗೆ ಬೇಡಿಕೆ ಬಂದ ಹಿನ್ನೆಲೆ ಗುಲಾಬಿಗೆ ಬಂಪರ್ ಬೆಲೆ ಬಂದಿದೆ.

ಹೌದು.ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ 1 ಕೆಜಿ ಗುಲಾಬಿ ಹೂವಿನ ಬೆಲೆ 400 ರಿಂದ 500 ರೂವರೆಗೂ ಮಾರಾಟವಾಗಿದೆ.

ಸೇವಂತಿ ಹೂಗಳು ಕೆಜಿಗೆ 250 ರಿಂದ 350 ರೂವರೆಗೂ ಮಾರಾಟವಾಗುತ್ತಿದೆ.

ಗುಲಾಬಿ ಬೆಳೆದ ರೈತರಲ್ಲಿ ಸಂತಸ ಮನೆ ಮಾಡಿದರೆ ಹೂ ಕೊಂಡುಕೊಳ್ಳುವ ಗ್ರಾಹಕರು ಬೆಲೆ ಜಾಸ್ತಿ ಎಂದು ಗೊಣಗುತ್ತಿದ್ದಾರೆ.

Latest Indian news

Popular Stories