ಉಡುಪಿ: ಅಪರಿಚಿತರಿಂದ ವಾಟ್ಸಪ್ ಗ್ರೂಪ್ – ಅಧಿಕ ಲಾಭಾಂಶ ನಂಬಿ 17 ಲಕ್ಷ ಕಳೆದುಕೊಂಡ ವ್ಯಕ್ತಿ!

ಉಡುಪಿ: ಜಿಲ್ಲೆಯಲ್ಲಿ ಸೈಬರ್ ಖದೀಮರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪರಿಚಿತರು ವಾಟ್ಸಪ್ ಗ್ರೂಪ್ ಮಾಡಿ ಅಧಿಕ ಲಾಭಾಂಶದ ಆಮಿಷವೊಡ್ಡಿ 17 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಸಂತ್ರಸ್ಥ ಅಶ್ವಿನ್‌ ಕಾಮತ್‌ ಬಿ (42) ಕುಂಜಿಬೆಟ್ಟು ಇವರನ್ನು GFSL-Security official Stocks-F10 ಎಂಬ ವಾಟ್ಸ್ ಆಫ್ ಗುಂಪಿಗೆ ಸೇರ್ಪಡೆ ಮಾಡಿದ್ದು ಈ ಗ್ರೂಪಿನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ನಂತರ ಅವರು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿದ್ದು ಅದರಂತೆ ದಿನಾಂಕ: 13/05/2024 ರಿಂದ ದಿನಾಂಕ: 03/06/2024 ರ ವರೆಗೆ ಆಪಾದಿತರು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 17,89,001/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ.

ಅದರೆ ಈ ತನಕ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ವಂಚನೆ ಮಾಡಿರುತ್ತಾರೆ. ಈ ಬಗ್ಗೆ CEN ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 68/2024 ಕಲಂ 66 (ಡಿ) ಐ.ಟಿ. ಆಕ್ಟ ಮತ್ತು 420 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories