ಮಂಗಳೂರು: ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ನಲ್ಲಿ ಆಟೋರಿಕ್ಷಾ ಪಾರ್ಕ್‌ನಲ್ಲಿ ಕ್ಯೂನಲ್ಲಿ ಇದ್ದಾಗಲೇ ರಿಕ್ಷಾ ಚಾಲಕರೊಬ್ಬರು ಹೃದಯಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೂಲತಃ ಬಜಾಲ್ ವಿದ್ಯಾನಗರದ ನಿವಾಸಿ ಇಕ್ಬಾಲ್ (47) ಮೃತಪಟ್ಟ ಆಟೋಚಾಲಕ. ಸದ್ಯ ಇವರು ಅಡ್ಯಾರ್ ಕಣ್ಣೂರಿನ ಬೋರುಗುಡ್ಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಇವರು ಸೆಂಟ್ರಲ್ ರೈಲ್ವೇ ರಿಕ್ಷಾಪಾರ್ಕ್‌ನಲ್ಲಿ ಕ್ಯೂ ನಲ್ಲಿರುವಾಗಲೇ ಇಕ್ಬಾಲ್‌ರವರಿಗೆ ಎದೆನೋವು ಕಾಣಿಸಿಕೊಂಡಿದೆ. ಇತರ ರಿಕ್ಷಾ ಚಾಲಕರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.