ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಿಗ್ರಾಮ ಕಾರ್ಕಡ ಎಂಬಲ್ಲಿ ಪತ್ನಿಯನ್ನು ಪತಿ ಕೊಲೆಗೈದ ಬಗ್ಗೆ ವರದಿಯಾಗಿದೆ. ಈ ಕೊಲೆ ಕೃತ್ಯ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಬೀದರ್ ದೊಣಗಪುರ ಮೂಲದ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆ ನಿವಾಸಿ ಜಯಶ್ರೀ(31) ಕೊಲೆಗೀಡಾದ ಮಹಿಳೆ.
ಕೊಲೆ ಆರೋಪಿ ಆಕೆಯ ಪತಿ ಕಿರಣ್ ಉಪಾಧ್ಯ ಗುಂಡ್ಮಿ(44) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಿರಣ್ ಕಳೆದ ಎರಡು ವರ್ಷಗಳಿಂದ ನರಸಿಂಹ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ. ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.