ಮೂಡುಬಿದಿರೆ: ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಣೆಯಾದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸವಾಗಿದ್ದ ಬೆಂಗಳೂರು ಮೂಲದ ಬೃಂದಾ ಜೈನ್ (17) ಕಾಣೆಯಾದ ವಿದ್ಯಾರ್ಥಿನಿ.
ಕಳೆದ ಒಂದು ವಾರದ ಹಿಂದೆ ಹಾಸ್ಟೆಲ್ ನಿಂದ
ಕಾಣೆಯಾಗಿರುವುದಾಗಿ ತಿಳಿದು ಬಂದಿದೆ. ಬಿಳಿ ಮೈ ಬಣ್ಣ
ಕೋಲು ಮುಖ, 5ಅಡಿ ಎತ್ತರವನ್ನು ಹೊಂದಿರುವ
ಬೃಂದಾ ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು
ಬಲ್ಲವಳಾಗಿದ್ದಾಳೆ. ಕಾಣೆಯಾಗುವ ಸಂದರ್ಭ ಕಪ್ಪು
ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದು
ಈ ವಿದ್ಯಾರ್ಥಿನಿ ಬಗ್ಗೆ ಮಾಹಿತಿ ದೊರೆತಲ್ಲಿ ಮೂಡುಬಿದಿರೆ
ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08258-236333
ಸಂಪರ್ಕಿಸಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.