ಉಡುಪಿ: ಹೂಡಿಕೆಯಿಂದ ಅಧಿಕ ಲಾಭಗಳಿಸಬಹುದೆಂಬ ಹುಚ್ಚು ಜನರನ್ನು ಯಾವ ರೀತಿ ಇಂತಹ ವಂಚನ ಜಾಲಗಳಲ್ಲಿ ಸಿಲುಕಿಸುತ್ತಿದೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿ!
ದೂರುದಾರೆ ಲಿನೆಟ್ ಸೋಫಿಯಾ ಡಿʼಮೆಲ್ಲೋ ಇವರು ಮತ್ತು ಅವರ ಗಂಡ ಹಾಗೂ ಗಂಡನ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ್ ಎಂಬುವವರು ತಾನು ಕೆಲಸ ಮಾಡಿಕೊಂಡಿರುವ SP Capitals Trading ಕಂಪೆನಿಯಲ್ಲಿ ಹಣವನ್ನು ಹೂಡಿಕೆ ಮಾಡಿದಲ್ಲಿ ಅಧಿಕ ಲಾಭವನ್ನು ಪಡೆಯಬಹುದು ಎಂದು ನಂಬಿಸಿ ದಿನಾಂಕ 19/09/2019 ರಿಂದ ದಿನಾಂಕ 29/08/2024 ರ ತನಕ ಹಂತ ಹಂತವಾಗಿ ಒಟ್ಟು ರೂಪಾಯಿ 3,60,67,000/- ಹಣವನ್ನು ಆಕೆಯ ಖಾತೆಗೆ ಜಮೆ ಮಾಡಿದ್ದಾರೆ.
ಈ ವರೆಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಲಾಭಾಂಶವನ್ನಾಗಲೀ ನೀಡದೇ, ನೀಡದೇ ನಂಬಿಕೆ ದ್ರೋಹ ಎಸಗಿ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2024 ಕಲಂ: 316(2), 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.