ಕಾಪು ಜಮಾಅತೆ ಇಸ್ಲಾಮಿ ಹಿಂದ್ ಹಿರಿಯ ಸದಸ್ಯ ವೈಸಿ ಅಬ್ದುಲ್ಲಾ ನಿಧನ

ಕಾಪು ಜಮಾಅತೆ ಇಸ್ಲಾಮಿ ಹಿಂದ್ ಹಿರಿಯ ಕಾರ್ಯಕರ್ತ ವೈಸಿ ಅಬ್ದುಲ್ಲಾ ಅಲ್ಪ ಕಾಲದ ಅನಾರೋಗ್ಯದ ನಂತರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಸನ್ಮಾರ್ಗ ವಾರ ಪತ್ರಿಕೆಗಾಗಿ ಉಡುಪಿ ಭಾಗದಲ್ಲಿ ಚಂದಾದಾರಿಕೆ ಮಾಡುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ಕಾಪು ಘಟಕದ ಹಿರಿಯ ಸದಸ್ಯರಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು.ಇವರು 1985 ರಲ್ಲಿ ಜಮಾಅತ್ ನ ಹಿತೈಷಿಯಾಗಿ, 1990 ರಲ್ಲಿ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಾ 2001 ರಲ್ಲಿ ಸದಸ್ಯರಾಗಿ ನಿಯುಕ್ತಗೊಂಡರು.ಇವರು 3 ದಶಕಗಳಷ್ಟು ಕಾಲ ಸನ್ಮಾರ್ಗ ವಾರಪತ್ರಿಕೆ ಮತ್ತು ಅನುಪಮಾ ಮಾಸಿಕದ ಪ್ರತಿನಿಧಿಯಾಗಿ ಮೈಸೂರು ಹಾಗೂ ದ. ಕನ್ನಡ, ಉಡುಪಿ ಜಿಲ್ಲೆ ಯಲ್ಲಿ ಕಾರ್ಯ ನಿರ್ವಹಿಸಿ ಸಾವಿರಾರು ಚಂದಾದಾರನ್ನಾಗಿಸಿದ್ದರು. ಇವರಿಗೆ 74 ವರ್ಷ ವಯಸ್ಸಾಗಿದ್ದು, 5 ಗಂಡು, 2 ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗದವರನ್ನು ಅಗಲಿರುತ್ತಾರೆ.ಕಾಪು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಅನ್ವರ್ ಅಲಿ ಕಾಪು ಸಂತಾಪ ಸೂಚಿಸಿದ್ದಾರೆ.

Latest Indian news

Popular Stories