ಮಲ್ಪೆ: ಸೆ. 5 ರಂದುರಂದು ಉಡುಪಿ ನಗರ ಠಾಣಾ ವ್ಯಾಪ್ತಿಯ ಪ್ರಕಾಶ ಪಿಎಸ್‌ಐ-2 ಉಡುಪಿ ಸಂಚಾರ ಪೊಲೀಸ್ ಠಾಣೆ, ರವರು ರೌಂಡ್ಸ್ ನಲ್ಲಿರುವಾಗ ಸುಮಾರು 10:54 ಗಂಟೆ ಸಮಯಕ್ಕೆ ಉಡುಪಿ ಕಂಟ್ರೋಲ್ ರೂಮ್ ನಿಂದ ಉಡುಪಿ ನಗರ ಠಾಣಾ ರಾತ್ರಿ ಗಸ್ತು ಮತ್ತು ಮಲ್ಪೆ ಠಾಣಾ ರಾತ್ರಿ ಗಸ್ತು ಅಧಿಕಾರಿಗಳಿಗೆ ಕರೆ ಮಾಡಿ ಎಲ್ಲಿಯೋ ಡಿ.ಜೆ ಸೌಂಡ್ ಕೇಳುತ್ತಿದ್ದು, ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಗಮನಿಸಿದಾಗ ಈ ಸ್ಥಳವು ಮಲ್ಪೆ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿ ತಡರಾತ್ರಿ 12:31 ಗಂಟೆಗೆ ಉಡುಪಿ ತಾಲೂಕು ಮೂಡಬೆಟ್ಟು ಗ್ರಾಮದ ಕಲ್ಯಾಣಪುರ ಎಂಬಲ್ಲಿಗೆ ತಲುಪಿ ನೋಡಿದಾಗ ಅಲ್ಲಿನ 1 ನೇ ಆಪಾದಿತ ಶೇಖರ್ ಬೈಕಾಡಿ ರವರ ಮಗಳ ಮೆಹೆಂದಿ ಕಾರ್ಯಕ್ರಮಕ್ಕೆ ಅಳವಡಿಸಿದ ಡಿಜೆ ಸೌಂಡ್ಸ್ ಆಗಿದ್ದು, ಇದು ನಂದಾದೀಪ ಹೆಸರಿನ ಡಿಜೆ ಸೌಂಡ್ಸ್ ಎಂದು ತಿಳಿದು ಬಂದಿದೆ.
ಆದ್ದರಿಂದ ನಿಯಮ ಉಲ್ಲಂಘಿಸಿ ತಡ ರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿ ಕಾರ್ಯಕ್ರಮ ನಡೆಸಿದ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿದ ಶೇಖರ್ ಬೈಕಾಡಿ ಹಾಗೂ ಡಿಜೆ ಸಿಸ್ಟಂ ಒದಗಿಸಿದ ನಂದಾದೀಪ ಸಿಸ್ಟಂ ನ ಮಾಲೀಕ ನವೀನ ರವರ ವಿರುದ್ಧ ಮಲ್ಪೆಪೊಲೀಸ್ ಠಾಣೆ ಅಪರಾಧ ಕ್ರಮಾಂಕ:118/2024 ಕಲಂ:109 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿರುತ್ತಾರೆ.