ಉ.ಕ | ರೈಲ್ವೆ ಹಳಿಯಲ್ಲಿ ಬಿರುಕು, ರೈಲ್ವೆ ಟ್ರಾಕ್ ಮ್ಯಾನ್ ಮಹಾದೇವ ನಾಯ್ಕ ಗಮನಕ್ಕೆ | ತಪ್ಪಿದ ದುರಂತ

ಕಾರವಾರ: ಕುಮಟಾ ಹೊನ್ನಾವರ ಮಾರ್ಗ ಮಧ್ಯೆ ರೈಲ್ವೆ ಹಳಿಯ ಜಾಯಿಂಟ್ ನಲ್ಲಿ ವೆಲ್ಡಿಂಗ್ ಓಪನ್ ಆಗಿ ಬಿರುಕು ಕಾಣಿಸಿತ್ತು. ಇದನ್ನು ಗಮನಿಸಿದ ಟ್ರಾಕ್ ಮ್ಯಾನ್ ಮಹಾದೇವ ನಾಯ್ಕ 500 ಮೀಟರ್ ಓಡಿ ಹೋಗಿ ಚಲಿಸುತ್ತಿದ್ದ ರೈಲಿಗೆ ಕೆಂಪು ಬಾವುಟ ತೋರಿಸಿ, ಆಗಬಹುದಿದ್ದ ರೈಲ್ವೆ ದುರಂತ ತಪ್ಪಿಸಿದ್ದಾನೆ .

ತಿರುವನಂತಪುರಂ ದಿಂದ ದೆಹಲಿಗೆ ಹೊರಟ ರೈಲು ಹೊನ್ನಾವರ ದಾಟಿತ್ತು. ಇತ್ತ ರೈಲ್ವೆ ಟ್ರಾಕ್ ಮನ್ ಮಹಾದೇವ ನಾಯ್ಕ ಕುಮಟಾ ಹೊನ್ನಾವರ ಮಧ್ಯೆ ರೈಲ್ವೆ ಹಳಿ ಬಿರುಕು ಗಮನಿಸಿ, ಹೊನ್ನಾವರ ಸ್ಟೆಶನ್ ಮಾಸ್ಟರ್ ಗೆ ರೈಲು ತಡೆಯಲು ಪೋನ್ ಮಾಡಿದ್ದಾರೆ. ಅಷ್ಟೊತ್ತಿಗೆ ರೈಲು ಹೊನ್ನಾವರ ನಿಲ್ದಾಣ ಬಿಟ್ಟಿತ್ತು. ಆಗ ಬಿರುಕು ಬಿಟ್ಟ ಜಾಗದಿಂದ ೫೦೦ ಮೀಟರ್ ಓಡಿದ‌ ಮಹಾದೇವ ರೈಲ್ವೆ ಗೆ ಕೆಂಪು ನಿಶಾನೆ ತೋರಿಸಿ ರೈಲು ತಡೆದಿದ್ದಾನೆ. ಇದರಿಂದ ಆಗಬಹುದಾಗಿದ್ದ ದುರಂತ ತಪ್ಪಿ ದೆ. ಮಹಾದೇವ ನಾಯ್ಕನ ಸಮಯ ಪ್ರಜ್ಞೆ ಹಾಗೂ ಜಾಣತನ ಗಮನಿಸಿ ಕೊಂಕಣ ರೈಲ್ವೆ ಅಧಿಕಾರಿಗಳು ಟ್ರಾಕ್ ಮನ್ ಮಹಾದೇವ ನಾಯ್ಕನನ್ನು ಅಭಿನಂದಿಸಿದ್ದಾರೆ. ಟ್ರಾಕ್ ಬಳಿ ಸನ್ಮಾನ ಮಾಡಿದ್ದಾರೆ.

Latest Indian news

Popular Stories