ಕಾರವಾರ: ನಗರದ ಸಾಯಿಕಟ್ಟಾ ಪ್ರದೇಶದ ಬಿಂಧು ಮಾಧವ ದೇವಸ್ಥಾನದ ಬಳಿ ಇರುವ ಬೋರ್ಕರ್ ಕುಟುಂಬದಲ್ಲಿ ಗಣೇಶ ವಿಗ್ರಹ ದ ಎದುರಿನ ಹಣಕ್ಕಾಗಿ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಸಂದೇಶ ಪ್ರಭಾಕರ ಬೋರ್ಕರ್ ಎಂಬ ಯುವಕನನ್ನು ಆತನ ಚಿಕ್ಕಪ್ಪನ ಮಗ ಮನೀಷ್ ಮನೋಹರ ಬೋರ್ಕರ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ. ಮನೀಷ್ ,ಕಿರಣ್ ಹಾಗೂ ಕೊಲೆಗೆ ಸಹಕರಿಸಿದ ಆರೋಪದಲ್ಲಿ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಗಣಪತಿ ಪ್ರತಿಷ್ಠಾಪನೆ ನಂತರ ,ವಿಗ್ರಹದ ಎದುರಿಗೆ ಇದ್ದ ಹಣದ ವಿಚಾರವಾಗಿ ಗಲಾಟೆ ಆಯಿತು ಎನ್ನಲಾಗಿದೆ. ಪೊಲೀಸರು ಸ್ಥಳ ಮಹಜರು ಮಾಡಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಸಂದೇಶ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರವಾರ ಸಾಯಿಕಟ್ಟಾ ಪ್ರದೇಶದಲ್ಲಿ ಆತಂಕದ ವಾತಾವರಣ ಏರ್ಪಟ್ಟಿದೆ. ಗಣೇಶ ಹಬ್ಬದ ದಿನ ನಡೆದ ಕೊಲೆ ಹುಬ್ಬೇರಿಸುವಂತೆ ಮಾಡಿದೆ.