ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ತಾಲೂಕು ಮಂಚೇನಹಳ್ಳಿಯ ಬಿಸಲಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಸಿಬ್ಬಂದಿಯೊಬ್ಬರು ಪ್ರಸರಣ ಘಟಕದ ಕಂಬದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಶಿರಾ ಮೂಲದ ಉದಯ್ ಕುಮಾರ್ ಎಂಬುವರು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ಸಿಬ್ಬಂದಿ.

ದುರಸ್ತಿ ಕಾರ್ಯಕ್ಕೆ ವಿದ್ಯುತ್ ಕಂಬ ಏರಿದ್ದ ವೇಳೆ ವಿದ್ಯುತ್ ಹರಿದು ಉದಯ ಕುಮಾರ್ ಕಂಬದಲ್ಲಿಯೆ ಅಸುನೀಗಿದ್ದಾರೆ. ವಿಷಯ ತಿಳಿದ ಕೂಡಲೇ ಬೆಸ್ಕಾಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ವಿದ್ಯುತ್ ಪ್ರಸರಣ ಘಟಕದಲ್ಲಿ ರಿಪೇರಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಘಟನೆ ನಡೆದಿದೆ.

Latest Indian news

Popular Stories