ಮಲ್ಪೆ: ಮಲಗಿದ್ದಲ್ಲೇ 12 ವರ್ಷದ ಬಾಲಕಿ ಮೃತ್ಯು

ಮಲ್ಪೆ: ಮಲಗಿದ್ದಲ್ಲೆ ಹನ್ನೆರಡು ವರ್ಷದ ಬಾಲಕಿ ಮೃತಪಟ್ಟ ಕುರಿತು ವರದಿಯಾಗಿದೆ

ದೂರಿನ ಮಾಹಿತಿಯ ಪ್ರಕಾರ, ದಾಮೋದರ್‌ ಇವರ ಮಗಳು ದೃಶ್ಯ (12) ಎಂಬವಳು ನರಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದು ಸೆ.26 ರಂದು ಈ ಕುರಿತು ಚಿಕಿತ್ಸೆ ಕೊಡಿಸಿ ಬಂದಿದ್ದು, ರಾತ್ರಿ ಸುಮಾರು 09:00 ಗಂಟೆಗೆ ಊಟ ಮಾಡಿ ಔಷದಿ ತೆಗೆದುಕೊಂಡು ಮಲಗಿದ್ದ ದೃಶ್ಯಳು ಬೆಳಿಗ್ಗೆ 05:00 ಗಂಟೆಗೆ ಎಬ್ಬಿಸಿದಾಗ ಮಾತನಾಡದೇ ಇದ್ದುದ್ದರಿಂದ ಉಡುಪಿ ಹೈಟೆಕ್‌ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ದೃಶ್ಯಳನ್ನು ಪರೀಕ್ಷಿಸಿದ ವೈದ್ಯರು ದೃಶ್ಯಳು ಮೃತ ಪಟ್ಟಿರುವ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 53/2023 ಕಲಂ 174 ಸಿ.ಆರ್.ಪಿ.ಸಿ ‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories