ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಅವಾಂತರ | ನೆರೆ ಭೀತಿ ಹೆಚ್ಚಿಸಿದ ನದಿ ತೀರದ ಪ್ರದೇಶಗಳು

ಕೊಡಗು ಜಿಲ್ಲೆಯಲ್ಲಿ Prob ಬಿರುಸಿನ ಗಾಳಿಯೊಂದಿಗೆ ಮಳೆಯು ತೀವ್ರಗೊಂಡಿದ್ದು ಗುಡ್ಡ ಕುಸಿತ,ರಸ್ತೆ ಹಾಗೂ ಮನೆಗಳಿಗೆ ಮರಗಳು ಉರುಳಿ ಅಪಾರ ಹಾನಿಯಾದ ಘಟನೆ ನಡೆದಿದೆ
ಕುಶಾಲನಗರ ಹೋಬಳಿಯ ದೊಡ್ಡತ್ತೂರು ಗ್ರಾಮದ ಲಕ್ಷ್ಮಣ ಕಾಳಯ್ಯ ರವರ ಮನೆಯ ಗೋಡೆ ಹಾನಿಯಾಗಿದೆ.

ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಹೋಬಳಿಯ ಮಾಲಂಬಿ ಗ್ರಾಮದ ಯಮುನಾ ರಾಮ್ ಶೆಟ್ಟಿ ರವರ ವಾಸದ ಮನೆಯ ಮೇಲೆ ಭಾರಿ ಮಳೆ ಗಾಳಿಗೆ ಮರ ಬಿದ್ದು ಮನೆಗೆ ಹಾನಿಯಾಗಿದೆ.

ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಕುಸಿದು ಕೆರೆಯ ನೀರು ಜಮೀನುಗಳಿಗೆ ಹರಿದು ನಷ್ಟವುಂಟಾಗಿದೆ ಎಂದು ತಿಳಿದು ಬಂದಿದೆ.
‌‌
ಕುಶಾಲನಗರದ ಸಾಯಿ ಬಡಾವಣೆಗೆ ನಿನ್ನೆ ರಾತ್ರಿ ನೀರು ನುಗ್ಗಿದ್ದು ಸ್ಥಳೀಯರು ನೀರನ್ನು ಹೊರ ಚೆಲ್ಲುತ್ತಿರುವ ದೃಶ್ಯಗಳು ಕಂಡು ಬಂದಿದೆ
‌‌ಚೆಟ್ಟಳ್ಳಿ ಮಡಿಕೇರಿ ರಸ್ತೆ ಅಭ್ಯಾಲ ಬಳಿ ಮಣ್ಣು ಕುಸಿದು ರಸ್ತೆ ಬಂದ್ ಆಗಿದ್ದನ್ನು ಇದೀಗ ತೆರವು ಗೊಳಿಸಲಾಗಿದೆ.

ಬೆಟ್ಟಗೇರಿ,ಕೊಟ್ಟಮುಡಿ,ಹಾಗೂ ನಾಪೋಕ್ಲುವಿನ ಸಂಪರ್ಕ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು ತಾತ್ಕಾಲಿಕ ಅಡಚಣೆ ಉಂಟಾಗಿದೆ.

IMG 20240719 WA0052 Featured Story, Kodagu IMG 20240719 WA0055 1 Featured Story, Kodagu IMG 20240719 WA0053 Featured Story, Kodagu

Latest Indian news

Popular Stories