ಕೊಡಗು: ಜಿಲ್ಲೆಯಲ್ಲಿ ಮುಂದುವರಿದ ಬಾರಿ ಗಾಳಿ ಮಳೆಯ ಆರ್ಭಟ | ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆ ಸಂಪರ್ಕ ಕಡಿತ

ಕೊಡಗು ಜಿಲ್ಲೆಯಲ್ಲಿ ಬಾರಿ ಗಾಳಿ ಸಹಿತ ಮಳೆ ಮುಂದುವರೆದಿದ್ದು ಬಹಳಷ್ಟು ನಾಶ ನಷ್ಟಗಳಿಗೆ ಕಾರಣವಾಗುತ್ತಿದೆ.

ಸೋಮವಾರ ಪೇಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಸಾಕಷ್ಟು ನಾಶ ನಷ್ಟಗಳು ಉಂಟಾಗಿದೆ ಸೋಮವಾರಪೇಟೆ – ಶಾಂತಳ್ಳಿ ಮುಖ್ಯರಸ್ತೆಯ ಜೇಡಿಗುಂಡಿ ಬಳಿ ಬರೆ ಕುಸಿದು ಸಂಪೂರ್ಣ ರಸ್ತೆ ಮುಚ್ಚಿಹೋಗಿದೆ, ಈ ದಿನವೂ ಜೆಸಿಬಿ ಗಳ ಮೂಲಕ ರಸ್ತೆ ತೆರವು ಕಾರ್ಯ ನಡೆದಿದೆ
‌‌‌‌
ಸಿದ್ದಾಪುರ ವಿರಾಜಪೇಟೆ ರಸ್ತೆ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ:

ಬೆಳಗ್ಗೆ 0600 ಗಂಟೆಗೆ ಕಾರಿನ ಮೇಲೆ ಮರ ಬಿದ್ಧು ಕಾರು ಜಖಂಗೊಂಡಿದೆ.ಯಾವುದೇ ಪ್ರಾಣಪಾಯ ಆಗಿಲ್ಲ ಎಂದು ತಿಳಿದು ಬಂದಿಲ್ಲ. ಇತ್ತ ಕೊಡಗು ಕೇರಳ ಗಡಿ ಪ್ರದೇಶವಾದ ರಾಜ್ಯ ಹೆದ್ದಾರಿ ಶ್ರೀಮಂಗಲದಿಂದ ಕುಟ್ಟ ಕಡೆ ಹೋಗುವ ರಸ್ತೆ ಬದಿ ಮನ್ನೆ ಮಣ್ಣು ಕುಸಿದು ಹೋಗಿದ್ದು ಇನ್ನೊಂದು ಬದಿ ವಾಹನ ಸಂಚಾರ ಮಾಡಲು ಅವಕಾಶ ಮಾಡಿ ಕೊಡಲಾಗಿತ್ತು. ಆದ್ರೆ ಇಂದು ಅದು ಕೂಡ ದುರಸ್ತಿಗಿಡಾಗಿದ್ದು ಬಸ್ ಒಂದು ರಸ್ತೆ ಬದಿ ಸಿಲುಕಿಕೊಂಡಿದೆ.. ಇದೀಗ ರಸ್ತೆ ಸಂಚಾರ ಈ ಭಾಗದಲ್ಲಿ ಬಂದ್ ಆಗಿದೆ.

ಪಾರಾಣೆಯಿಂದ ವಿರಾಜಪೇಟೆಗೆ ಸಾಗುವ ಬೆಳ್ಳುಮಾಡು ಮುಖ್ಯರಸ್ತೆ.. ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಅಧಿಕ ಮಳೆ ಗಾಳಿಯಿಂದಾಗಿ ಇಂದು ಮುಂಜಾನೆ ಸುಂಟಿಕೊಪ್ಪ ಉಲುಗುಲಿ ಒಡೆಪ್ಪನ ಮನೆಗೆ ಸಂಪರ್ಕಿಸುವ ರಸ್ತೆಯಲ್ಲಿ ದೊಡ್ಡ ಗಾತ್ರದ ಮರ ಬುಡ ಸಮೇತ ಬಿದ್ದಿದ್ದು ನಡೆಯಲು ಹಾಗೂ ಸಂಚಾರಕ್ಕೆ ಅಡ್ಡಿಯಾಗಿದೆ.ಸುಂಟಿಕೊಪ್ಪ -ಮಡಿಕೇರಿ ಮಾರ್ಗಮಧ್ಯದ ಸ್ಯಾಂಡಲ್ ಕಾಡ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆಯಾಗಿರುವ ಬಗ್ಗೆ ವರದಿಯಾಗಿದೆ
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟದ ಲೈನ್ ಮನೆಯ ಮೇಲೆ ಮಳೆ ಗಾಳಿಗೆ ವಿದ್ಯುತ್ ಕಂಬ ತುಂಡಾಗಿ ಬಿದ್ದಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.

‌‌‌ಮರ ಬಿದ್ದು ಶಾಲೆಗೆ ಹಾನಿ:

ವಿರಾಜಪೇಟೆ ತಾಲ್ಲೂಕಿನ ಕಳತ್ಮಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ಮರ ಬಿದ್ದು ಹಾನಿಯಾಗಿದ್ದು, ತೆರವುಗೊಳಿಸುವ ಕಾರ್ಯ ನಡೆದಿದೆ.

ಕೊಡಗು ಜಿಲ್ಲೆಯ ಮಳೆ ವಿವರ(ಮಿಲಿ ಮೀಟರ್‌ಗಳಲ್ಲಿ

ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೮೮.೧೫ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೪೧.೮೨ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೮೫೮.೬೯ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೧೦೫.೧೯ ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೦೨.೪೭ ಮಿ.ಮೀ. ಕಳೆದ ವರ್ಷ ಇದೇ ದಿನ ೭೪.೨೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೫೩೧.೦೭ ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ ೧೮೪೬.೫೨ ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೭೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೩೧.೩೫ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೭೨೯.೬೫ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೮೯೫.೫೬ ಮಿ.ಮೀ. ಮಳೆಯಾಗಿತ್ತು.

ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೯೮.೭೯ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೨೭.೧೮ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೭೮೦.೮೬ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೯೦೯.೮೮ ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೧೨೦.೬೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೫೧.೭೮ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೨೧೨೩.೪೬ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೧೧೭೪.೧೪ ಮಿ.ಮೀ. ಮಳೆಯಾಗಿತ್ತು.

ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ ೩೯.೯೦ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೨೪.೬೦ ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ ೧೧೨೮.೪೦ ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ ೬೯೯.೮೫ ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ ೪೭.೨೦, ನಾಪೋಕ್ಲು ೧೩೪.೨೦, ಸಂಪಾಜೆ ೪೮.೫೦, ಭಾಗಮಂಡಲ ೧೮೦, ವಿರಾಜಪೇಟೆ ೭೮, ಅಮ್ಮತ್ತಿ ೮೦, ಹುದಿಕೇರಿ ೧೩೪.೧೦, ಶ್ರೀಮಂಗಲ ೧೫೩, ಪೊನ್ನಂಪೇಟೆ ೬೭, ಬಾಳೆಲೆ ೪೧.೧೯, ಸೋಮವಾರಪೇಟೆ ಕಸಬಾ ೧೨೨.೮೦, ಶನಿವಾರಸಂತೆ ೭೩, ಶಾಂತಳ್ಳಿ ೨೦೦, ಕೊಡ್ಲಿಪೇಟೆ ೮೬.೬೦, ಕುಶಾಲನಗರ ೧೭.೬೦, ಸುಂಟಿಕೊಪ್ಪ ೬೨.೨೦ ಮಿ.ಮೀ.ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ (೨೬-೦೭-೨೦೨೪) ವರದಿ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳು, ಇಂದಿನ ನೀರಿನ ಮಟ್ಟ ೨೮೫೫.೮೮ ಅಡಿಗಳು. ಕಳೆದ ವರ್ಷ ಇದೇ ದಿನ ೨೮೫೩.೧೩ ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ ೩೨.೬೦ ಮಿ.ಮೀ., ಕಳೆದ ವರ್ಷ ಇದೇ ದಿನ ೧೫.೬೦ ಮಿ.ಮೀ., ಇಂದಿನ ನೀರಿನ ಒಳಹರಿವು ೯೨೮೮ ಕ್ಯುಸೆಕ್, ಕಳೆದ ವರ್ಷ ಇದೇ ದಿನ ೧೨೮೬೧ ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ ೧೩೯೧೬ ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ ೧೨೬೨೫ ಕ್ಯುಸೆಕ್.

IMG 20240726 WA0076 Featured Story, Kodagu IMG 20240726 WA0075 Featured Story, Kodagu IMG 20240726 WA0073 Featured Story, Kodagu

Latest Indian news

Popular Stories