ಉ.ಕ: ಶನಿವಾರ ಶಾಲಾ ಕಾಲೇಜಿಗೆ ರಜೆ


ಕಾರವಾರ: ಜಿಲ್ಲೆಯ ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಾಲಾ ಕಾಲೇಜುಗಳಿಗೆ ಜು.27 ರಂದು ರಜೆ ಘೋಷಿಸಿದ್ದಾರೆ. ಹಳಿಯಾಳ, ಮುಂಡಗೋಡ ಹೊರತು ಪಡಿಸಿ, ಎಲ್ಲಾ ತಾಲೂಕಿನ ಶಾಲೆ ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜನರು ಮರಗಳ ಕೆಳಗೆ, ವಿದ್ಯುತ್ ಕಂಬಗಳ ಬಳಿ,
ದುರ್ಬಲ ಗೋಡೆಗಳ ಪಕ್ಕ ನಿಲ್ಲದಂತೆ ಸುರಕ್ಷಿತವಾಗಿರಬೇಕೆಂದು ಜಿಲ್ಲಾಡಳಿತ ಸೂಚಿಸಿದೆ.

Latest Indian news

Popular Stories