ಗಂಗಾವಳಿ ನದಿಯಡಿಯಲ್ಲಿ ಟ್ರಕ್ಕ್ ಇರುವ ಕುರುಹು; ತೀವ್ರಗೊಂಡ ಕಾರ್ಯಾಚರಣೆ – ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ

ಕಾರವಾರ : ಶಿರೂರು , ಉಳುವರೆ ಗ್ರಾಮಗಳ ಮಧ್ಯೆ ಹರಿವ
ಗಂಗಾವಳಿ ನದಿಯಲ್ಲಿ ಲಾರಿ ಪತ್ತೆಯ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ.

ಕೋಝಿಕ್ಕೋಡ್ ಮೂಲದ ಮುನಾಫ್ ಗೆ ಸೇರಿದ ಲಾರಿಯಲ್ಲಿ ಟಿಂಬರ್ ತುಂಬಿತ್ತು. ಅದನ್ನು ಕೇರಳದ ಚಾಲಕ ಅರ್ಜುನ್ ಚಲಾಯಿಸುತ್ತಿದ್ದ. ಜಗಲಬೇಟ (ಜೊಯಿಡಾ) ದಿಂದ ಕೇರಳಕ್ಕೆ ತೆರಳುವಾಗ ಜು.15ರ ರಾತ್ರಿ ಶಿರೂರು ಬಳಿ ಹೆದ್ದಾರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ. ಜು. 16 ರ ಬೆಳಗ್ಗೆ ಶಿರೂರು ಬಳಿ 8-45 ಕ್ಕೆ ಗುಡ್ಡ ಕುಸಿದು ,ಲಾರಿ ಸಹಿತ ಅರ್ಜುನ್ ಹಾಗೂ ಇತರೆ ಹತ್ತು ಜನ ನದಿಯಲ್ಲಿ ಕೊಚ್ಚಿ ಹೋಗಿದ್ದರು. ಲಾರಿ ಸುಳಿವು ಸಿಕ್ಕ ಬಗ್ಗೆ ಜಿಲ್ಲಾಡಳಿತ ಇನ್ನೂ ಖಚಿತಪಡಿಸಿಲ್ಲ.

ನಾಪತ್ತೆಯಾಗಿದ ಅರ್ಜುನ್ ಮತ್ತು ಜಗನ್ನಾಥ, ಲೋಕೇಶ್ ಗಾಗಿ ಹುಡುಕಾಟ ಕಾರ್ಯಾಚರಣೆ ಬುಧವಾರ ನಡೆದಿದೆ. ಕಾರ್ಯಾಚರಣೆ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.

ಟ್ರಕ್ ಒಂದು ನೀರಿನಲ್ಲಿ ಪತ್ತೆಹಚ್ಚಲಾಗಿದೆ. ನೌಕಾಪಡೆಯ ಸ್ವಿಮ್ಮರ್ಸ , ಮುಳುಗು ತಜ್ಞರು ಶೀಘ್ರದಲ್ಲೇ ನದಿಯಲ್ಲಿ ಲಂಗರು ಹಾಕಲು ಪ್ರಯತ್ನಿಸುತ್ತಿದ್ದಾರೆ‌ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ನದಿಯ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುತ್ತಿದೆ. ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಶೋಧಕ್ಕಾಗಿ ನಿಯೋಜಿಸಲಾಗಿದೆ. ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ಮೃತದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಶಿರೂರಿನಲ್ಲಿ ಭಾರೀ ಮಳೆ ಮತ್ತು ಗಾಳಿಯ ನಡುವೆ ಕರಾವಳಿ ಕಾವಲು ಪಡೆಗೆ ಸೇರಿದ ಹೆಲಿಕಾಪ್ಟರ್ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದೆ. ಬುಧವಾರ ಬೆಳಗ್ಗೆ ಸ್ಥಳಕ್ಕೆ ಬಂದ ಲಾಂಗ್ ಬೂಮ್ ಅಗೆಯುವ ಯಂತ್ರದ ಸಹಾಯದಿಂದ ಟ್ರಕ್ ಅನ್ನು ದಡಕ್ಕೆ ತರಲು ಬಳಸಲಾಗುತ್ತದೆ. ಅಗೆಯುವ ಯಂತ್ರವು 60 ಮೀಟರ್ ಆಳದಿಂದ ಮಣ್ಣನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ.  ಈ ಹಿಂದೆ ನದಿಯಿಂದ ಲೋಹದ ಭಾಗಗಳ ಉಪಸ್ಥಿತಿಯನ್ನು ಸೂಚಿಸುವ ಸೋನಾರ್ ಸಿಗ್ನಲ್ ಪತ್ತೆಯಾಗಿತ್ತು. ಅದೇ ಪ್ರದೇಶದಿಂದ ರಾಡಾರ್ ತಪಾಸಣೆಯ ಸಮಯದಲ್ಲಿ ಸಿಗ್ನಲ್ ಕೂಡ ಸಿಕ್ಕಿತು. 

Latest Indian news

Popular Stories