Kanwar Yatra ಆದೇಶಕ್ಕೆ UP ಸರ್ಕಾರ ಸಮರ್ಥನೆ: ಶಾಂತಿ ಖಾತ್ರಿಪಡಿಸಿಕೊಳ್ಳಲು ಈ ಕ್ರಮ- ಸುಪ್ರೀಂ ಗೆ ಮಾಹಿತಿ

ನವದೆಹಲಿ: ಉತ್ತರ ಪ್ರದೇಶ ಸರ್ಕಾರ kanwar yatra ಆದೇಶಕ್ಕೆ ಸಮರ್ಥನೆ ನೀಡಿದ್ದು, ಶಾಂತಿ ಖಾತ್ರಿಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.

ಕನ್ವರ್ ಯಾತ್ರೆ ಸಾಗುವ ಮಾರ್ಗಗಳಲ್ಲಿನ ಅಂಗಡಿಗಳ ಮಾಲಿಕರು ತಮ್ಮ ಹೆಸರನ್ನು ಪ್ರದರ್ಶಿಸುವುದನ್ನು ಉತ್ತರ ಪ್ರದೇಶ ಸರ್ಕಾರ ಕಡ್ಡಾಯಗೊಳಿಸಿತ್ತು.

ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಸುಪ್ರೀಂ ಕೋರ್ಟ್ ಗೆ ವಿಸ್ತೃತ ವಿವರಣೆ ನೀಡಿದ್ದು, ಶಾಂತಿ ಖಾತ್ರಿಪಡಿಸಿಕೊಳ್ಳುವುದು ಹಾಗೂ ಸುಗಮ ಯಾತ್ರೆಯನ್ನು ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ಅಂಗಡಿಗಳ ಹೆಸರುಗಳಿಂದ ಉಂಟಾಗುತ್ತಿದ್ದ ಗೊಂದಲಗಳ ಬಗ್ಗೆ ಕನ್ವರ್ ಯಾತ್ರಿಗಳಿಂದ ದೂರುಗಳು ಬಂದಿದ್ದರಿಂದ ಈ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಉತ್ತರ ಪ್ರದೇಶ ಸರ್ಕಾರ ಕಾರಣ ನೀಡಿದೆ.

“ಯಾತ್ರೆಯು ಪ್ರಯಾಸಕರ ಪ್ರಯಾಣವಾಗಿದೆ, ಅಲ್ಲಿ ಕೆಲವು ಕನ್ವರಿಯಾಗಳು, ಅಂದರೆ ದಕ್ ಕನ್ವಾರಿಯಾಗಳು, ಕನ್ವರ್ ಒಮ್ಮೆ ತಮ್ಮ ಹೆಗಲ ಮೇಲೆ ಬಂದ ನಂತರ ವಿಶ್ರಾಂತಿ ಪಡೆಯಲು ಸಹ ನಿಲ್ಲುವುದಿಲ್ಲ. ತೀರ್ಥಯಾತ್ರೆಯ ಪವಿತ್ರ ವೈಶಿಷ್ಟ್ಯಗಳಿವೆ, ಉದಾಹರಣೆಗೆ ಒಮ್ಮೆ ಪವಿತ್ರ ಗಂಗಾಜಲವನ್ನು ತುಂಬಿದ ನಂತರ ನೆಲದ ಮೇಲೆ ಅಥವಾ ಗುಲಾರ್ ಮರದ ನೆರಳಿನಲ್ಲಿ ಇಡಬಾರದು, ಕನ್ವಾರಿಯಾ ಯಾತ್ರೆಯನ್ನು ವರ್ಷಗಳ ತಯಾರಿ ನಂತರ ಪ್ರಾರಂಭಿಸುತ್ತಾನೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕನ್ವರ್ ಯಾತ್ರೆ, ಕನ್ವರಿಯಾಸ್ ಎಂದು ಕರೆಯಲ್ಪಡುವ ಶಿವನ ಭಕ್ತರು ಗಂಗಾ ನದಿಯಿಂದ ಪವಿತ್ರ ನೀರನ್ನು ತರಲು ಪ್ರಯಾಣಿಸುವ ವಾರ್ಷಿಕ ತೀರ್ಥಯಾತ್ರೆಯಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಭಾಗವಹಿಸುತ್ತಾರೆ.

ಇಷ್ಟೆಲ್ಲಾ ವ್ರತ-ನೇಮಗಳಿರುವ ಕನ್ವಾರ್ ಯಾತ್ರೆ ವೇಳೆ ಯಾತ್ರಾರ್ಥಿಗಳು ಈ ಮಾರ್ಗದಲ್ಲಿ ನೀಡಲಾಗುವ ಆಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ಅದರ ತಯಾರಿಕೆಯ ಬಗ್ಗೆ ಆತಂಕಕ್ಕೆ ಕಾರಣವಾಯಿತು. ಆದ್ದರಿಂದ ಕನ್ವಾರಿಯಾಗಳ ನಿರ್ದಿಷ್ಟ ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ನಿರ್ದೇಶನವನ್ನು ಪರಿಚಯಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಆದರೆ ಆಹಾರ ವಸ್ತುಗಳ ಬಗ್ಗೆ ಅರಿಯಲು ಹೆಸರು ಹಾಕುವ ಕಾರಣವನ್ನು ಸ್ಪಷ್ಟವಾಗಿ ತಿಳಿಸಲು ಉ.ಪ್ರ ಸರಕಾರ ವಿಫಲವಾಗಿದೆ‌

Latest Indian news

Popular Stories