ಸುಪ್ರೀಂ ಕೋರ್ಟ್ ಗೆ 75 ವರ್ಷದ ಸಂಭ್ರಮ : ಪ್ರಧಾನಿ ಮೋದಿಯಿಂದ ಇಂದು ‘ವಜ್ರ ಮಹೋತ್ಸವ’ ಉದ್ಘಾಟನೆ

ನವದೆಹಲಿ: ಸುಪ್ರೀಂ ಕೋರ್ಟ್ ಗೆ 75 ವರ್ಷದ ಸಂಭ್ರಮಾಚರಣೆಯ ಮಹೋತ್ಸವದ ಕಾರ್ಯಕ್ರಮವನ್ನು ಇಂದು (ಜ.28) ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.

ಸುಪ್ರೀಂ ಕೋರ್ಟ್ ಪ್ರಾರಂಭವಾಗಿ ಸುಮಾರು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಇಂದು ಸುಪ್ರೀಂ ಕೋರ್ಟ್ ಅವರಣದಲ್ಲಿ ವಜ್ರ ಮಹೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸುಪ್ರೀಂ ಕೋರ್ಟ್ ಸಭಾಂಗಣದಲ್ಲಿ ಡಿಜಿಟಲ್ ಸುಪ್ರೀಂ ಕೋರ್ಟ್ ರಿಪೋರ್ಟ್ (ಡಿಜಿ ಎಸ್ಸಿಆರ್) ಅನ್ನು ಬಿಡುಗಡೆ ಮಾಡಲಿದ್ದಾರೆ.ಸುಪ್ರೀಂ ಕೋರ್ಟ್ ನ ವಜ್ರ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ಡಿಜಿಟಲ್ ಸುಪ್ರೀಂ ಕೋರ್ಟ್ ವರದಿ, ಡಿಜಿಟಲ್ ಕೋರ್ಟ್ಸ್ 2.0 ಮತ್ತು ಸುಪ್ರೀಂ ಕೋರ್ಟ್ ನ ಹೊಸ ವೆಬ್ಸೈಟ್ ಸೇರಿದಂತೆ ನಾಗರಿಕ ಕೇಂದ್ರಿತ ಮಾಹಿತಿ ಮತ್ತು ತಂತ್ರಜ್ಞಾನ ಉಪಕ್ರಮಗಳ ಸರಣಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.

Latest Indian news

Popular Stories